ಮನಸು ಮನಸುಗಳ ಪಿಸುಮಾತು

Monday, April 5, 2010

ಮರುಳಾ????????

ನಟ್ಟ ನರುಳಿನ ಒಂದು ಹೊತ್ತು
ಮುಚ್ಚಿದ್ದ ಕಣ್ಣನ್ನು ಪಟ್ಟೆಂದು ತೆರೆಯಲು
ಕಾರಣವೇನು?
ಮೆಲ್ಲನೆ ಹಣೆ ನೇವರಿಸಿ
ಮುಂಗುರುಳಿನೊಂದಿಗೆ ಚೆಲ್ಲಾಟವಾಡಿದ ಹಾಗೆ
ಝೆಲ್ಲೆನಿಸಿತು ಎದೆ ಒಂದು ಘಳಿಗೆ
ಇದು ಕನಸಾ? ಮರುಳಾ?
ಇಲ್ಲಾ ಬಂದವನು ನನ್ನವನಾ?
ಛೇ ಅವನಿಗಿಲ್ಲ ಬಿಂಕ! ಬಿಗುಮಾನ
ಬರಲು ನನ್ನೆಡೆಗೆ
ಅವ ನನ್ನ ಹೃದಯದ ರಾಜಕುಮಾರ
ಅಂತಃಪುರಕ್ಕೆ ಕಾಲಿರಿಸಲು ಅವನಿಗಿಲ್ಲ ಅಡೆತಡೆ
ಅವನ ನೋಡುವ ಬಯಕೆಯಿಂದ ಮುಚ್ಚಿದ ಕಂಗಳಲ್ಲಿ
ಕನಸಾಗಿ ಕಾಡಲು ಬಂದವನು ನನ್ನವನಾ?
ಆಸೆಗಳೇ ಹೀಗೆ ಹರಡಿಕೊಳ್ಳುತ್ತವೆ
ಆಕಾಶಕಿಂತಲೂ ಮಿಗಿಲಾಗಿ
ಅವಕ್ಕಿಲ್ಲ ಹಗಲು ರಾತ್ರಿಗಳ ಇರಾದೆ
ತಡೆಹಿಡಿದಷ್ಟು ಚಿಗುರುತ್ತವೆ ಹೊಸ ಹೊಸತಾಗಿ
ಕತ್ತರಿಸಿದಷ್ಟು ಒತ್ತರಿಸಿ ಬರುವ ಸುಳಿ ಬಾಳೆಯಂತೆ
ಕತ್ತಲಾದಂತೆ ಬೆತ್ತಲಾಗಿ ನಿಲ್ಲುವ ಬಯಕೆಗಳಂತೆ....
ಇದೇನು ಮರುಳಾ?

3 comments:

  1. ಆತ್ಮೀಯ
    ಸೊಗಸಾದ ಕವನ

    ಕನಸು ಕಾಣುವ ಕಣ್ಣೊಳಗೆ
    ಒಲವ ನೀಲಾಕಾಶ
    ಮಿಡಿವ ಮನದೊಳಗೆ
    ಎ೦ಥದೋ ಧೋ ಮಳೆ
    ಹುಡುಕೀ ಹುಡುಕೀ
    ಸಿಕ್ಕವನು ಮ್ರುಗಜಲ
    ಆದರೂ ಅದೇ
    ಜೀವ ಜಲ
    ಆಸೆಯೆ೦ಬುದು ಹೀಗೇ
    ಬೆಟ್ಟದಷ್ಟು ಸಿಗುತ್ತದೆ
    ಮತ್ತು ಬೆಚ್ಚಗಾಗಿಸುತ್ತದೆ

    ನಿಮ್ಮ ಕವನದೊಳಗಿರೂ ರಾಜ್ಕುಮಾರ ಯಾರ್ರೀ ? :):):)

    http://ananyaspandana.blogspot.com/

    ReplyDelete
  2. ಚಿತ್ರಾ ಕನಸು ಕಾಣಲು ಕನಸ ಕದ್ದವರು ಕಾರಣ ಅಲ್ಲವೇ ...? ಚನ್ನಾಗಿ ಮೂಡಿವೆ ಮನದ ಮಾತುಗಳು .. ಕವನದ ರೂಪದಲ್ಲಿ

    ReplyDelete