ಮನಸು ಮನಸುಗಳ ಪಿಸುಮಾತು

Friday, April 23, 2010

ಕಣ್ಣಂಚಿನ ಕನಸುಗಳಿಗೆ ರಂಗು ತುಂಬುವ ಆ ದಿನ.........

ಚಿನ್ನೂ ಅಂತೂ ನಾವು ಅಂದುಕೊಂಡ ದಿನ ಬಂದೇ ಬಿಡ್ತು. ಕಳೆದ ೯ ತಿಂಗಳಿನಿಂದಲೂ ಕಂಗಳಲ್ಲಿ ನಿನ್ನ ಕಾಣುವ ಕನಸಿನ ಚಿತ್ತಾರ ಹೊತ್ತವಳಿಗೆ ಅವಕ್ಕೆಲ್ಲಾ ರಂಗು ತುಂಬುವ ಆ ಸುಂದರ ಘಳಿಗೆ. ನಾನು ಒಬ್ಬರನೊಬ್ಬರು ನೋಡುವ ಆ ಸುಂದರ ಕ್ಷಣ ನಿಜಕ್ಕೂ ರೋಮಾಂಚನವೆನಿಸುತ್ತದೆ. ಎದೆಯಲ್ಲಿ ಆಡದೆ ಉಳಿದ ಮಾತುಗಳೆಲ್ಲಾ ಒಂದೇ ಬಾರಿಗೆ ಹೊರಹೊಮ್ಮುವ ಆ ದಿನ ನಿಜವಾಗಿಯೂ ಅವಿಸ್ಮರಣೀಯ! ಭಾವನೆಗಳ ಮಹಾಪೂರದಲ್ಲಿ ನಾವಿಬ್ಬರೂ ತೋಯುವ ಆ ಘಳಿಗೆ ಎಂದೂ ಮಾಸದ ನೆನಪು.

ಮಳೆರಾಯನ ಆಗಮನಕ್ಕೆ ಚೆನ್ನಾಗಿ ಕಾದು ನಿಂತು ನೆಲದ ಮೇಲೆ ಬಿದ್ದ ಹನಿಗಳಿಗೆ ಕಂಪು ಸೂಸುವ ವಸುಂಧರೆಯಂತೆ, ಪರಾಗ ಸ್ಪರ್ಶಕ್ಕೆ ಕಾದು ಕುಳಿತ ಸುಮದಂತೆ, ನಿನ್ನ ಎದೆ ಗೂಡಿನಲ್ಲಿ ಬೆಚ್ಚಗಿರುವ ಆಸೆ ಹೊತ್ತು ಕಾದು ಕುಳಿತವಳಿಗೆ ಕನಸು ನನಸಾಗುವ ಕಾಲವಿದು. ಪ್ರೀತಿ ಹುಟ್ಟುವುದು ಸುಕೋಮಲವಾದ ಹೃದಯದಲ್ಲಿ ಮಾತ್ರ. ಆಗ ಮಾತ್ರ ಮನಸ್ಸುಗಳು ಒಂದಾಗಿರಲು ಸಾಧ್ಯ ಇದು ಎಂದೂ ಪ್ರೀತಿ ನಿಯಮ.ಆ ಹೃದಯಗಳು ಒಂದಾದರೇ ಮಾತ್ರ ಆ ಪ್ರೀತಿಯ ಆವಿಷ್ಕಾರ!

ಹಾಗೆ ಒಂದಾದ ನಮ್ಮ ಪ್ರೀತಿಯನ್ನು ನಮ್ಮ ಕೊನೆ ಉಸಿರು ಇರೋವವರೆಗೂ ಕಣ್ಣಲ್ಲಿ ಕಣ್ಣಟ್ಟು ಜೋಪಾನ ಮಾಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಅಲ್ವಾ ಚಿನ್ನೂ. ಅದಕ್ಕಾಗಿ ಕಂಡ ಎಲ್ಲ ದೇವರನ್ನು ಮನದುಂಬಿ ಪ್ರಾರ್ಥಿಸಿದ್ದೇನೆ ನಮ್ಮಿಬ್ಬರ ಈ ಬಂಧ ಅಳಿಯದೆ ಕೊನೆಯವರೆಗೂ ಉಳಿಯಲಿ ನಮ್ಮ ಬಾಳಿನಲ್ಲಿ ನಾವು ಹೆಜ್ಜೆ ಇಡುವ ಆ ದಾರಿಯಲ್ಲಿ ನಮ್ಮಿಬ್ಬರ ಹೆಜ್ಜೆಗಳು ಎಂದೂ ಏರುಪೇರಾಗದೇ ಸರಿಸಮಾನವಾಗಿ ಸಾಗುತ್ತಿರಬೇಕು ಎಂಬ ಆಸೆಯೊಂದಿಗೆ ನಿನ್ನ ಮುಂದೆ ನಿಲ್ಲಲು ಅಣಿಯಾಗಿದ್ದೇನೆ.

ಚಿನ್ನೂ! ಹೆಣ್ಣು ತಾನಾಗಿ ಹೂ ಮುಡಿದಾಗ ಬರುವ ಅಂದಕ್ಕಿಂತಲೂ ತನ್ನ ನಲ್ಲ ಮುಡಿಸಿದಾಗ ಆ ಸೌಂದರ್ಯ ಇಮ್ಮಡಿಸುತ್ತದೆ ಅಂತ ಕೇಳಿದ್ದೆ. ಹಾಗೆ ನೀ ಮುಡಿಸುವ ಮುಲ್ಲೆಯನ್ನು ಮುಡಿದು ಆ ಅಂದವನ್ನು ನಿನ್ನ ಕಂಗಳಲ್ಲಿ ನೋಡುವ ಆಸೆ ನನ್ನುದು. ಇಷ್ಟೆಲ್ಲಾ ಆಸೆ ಕನಸುಗಳೊಂದಿಗೆ ನಿನ್ನವಳಾಗಲು ಕಾದವಳು
ನಿನ್ನ ಬಂಗಾರಿ

3 comments:

 1. ಆತ್ಮೀಯ
  ನಿಮ್ಮ ಪತ್ರ ಓದಿದ ಚೆಲುವ
  ಮೊಲ್ಲೆ ಮುಡಿಸಲು ಓದಿ ಬರುವ
  ಕಾತರತೆಯಲ್ಲಿ ಎ೦ಥ ಮೋಡಿಯಿದೆಯೋ
  ಕಣ್ಣೊಳಗೆ ಅದೆ೦ಥ ಮಿ೦ಚಿದೆಯೋ
  ಕಿರು ನಗೆ ಡವಗುಡುವ ಹ್ರುದಯ
  ಪ್ರೀತಿಯ ಸಾರುತಿದೆಯೋ

  ReplyDelete
 2. ಹಾಯ್
  ನಿಮ್ಮ ಕಣ್ಣಂಚಿನ ಕನಸುಗಳಿಗೆ ರಂಗು ತುಂಬುವ ಆ ದಿನ......... ಒಲವಿನ ಓಲೆ
  ತುಂಭಾ ಚೆನ್ನಾಗಿದೆ
  ಬಿಡುವಿದ್ದಾಗ ಎಲ್ಲಾ ಓದುವೇ
  ಥ್ಯಾಂಕ್ಸ

  ReplyDelete
 3. ಒಲವಿನೋಲೆ ಬಹಲ ರೋಮಾಂಟಿಕ್ ಆಗಿದೆ, ನಿಮ್ಮ ಬಂಧನ ಭಾವಬಂಧನವಾಗಿ ಹೀಗೆ ನಿರಂತರ ಸಾಗುತ್ತಿರಲಿ.
  ಅಕ್ಷತ.

  ReplyDelete