ಮನಸು ಮನಸುಗಳ ಪಿಸುಮಾತು

Wednesday, December 21, 2011

ಅವ ನನ್ನವ ....

ಅವ ನನ್ನವ
ಹೃದಯ ಪರಿಧಿಯ
ಎಲ್ಲ ಎಲ್ಲೆಗಳನ್ನು
ದಾಟಿದವ...


ಒಂಟಿತನದ ಗಡಿಗೆಯನ್ನೊಡೆದು
ಹೃದಯ ಮಂದಿರದಲ್ಲೊಂದು
ಗುಡಿಯನ್ನು ಕಟ್ಟಿದವ...

ನೆನಪಾದಗಲೆಲ್ಲ ನವಿರಾಗಿ ಕಂಪಿಸುವ
ಹೃದಯದ ಬಡಿತದ ತಾಳ
ತಪ್ಪದಂತೆ ಕಣ್ಣಿಟ್ಟು ಕಾಯ್ದವ...


ಕನಸ್ಸಿನಲ್ಲಿ
ಸಣ್ಣಗೆ ನಡುಗಿದಾಗಲೆಲ್ಲಾ
ಬಿಸಿಯುಸಿರನೀಯುತ್ತಾ
ಬೆಚ್ಚಗೆ ಸಲಹಿದವ...


ಹೃದಯದಲ್ಲಿ ಅಡಗಿದವನಿಗೊಮ್ಮೆ
ಸಾವಿರ ಬಾರಿ ಕೂಗಿ
ಹೇಳುತ್ತದೆ ನನ್ನ ಹೃದಯ
ಅವ ನನ್ನವ...ಅವ ನನ್ನವ....

No comments:

Post a Comment