ಮನಸು ಮನಸುಗಳ ಪಿಸುಮಾತು

Saturday, February 12, 2011

ನನ್ನ ಮುದ್ದಿನ ಕಾಗೆ ಬಂಗಾರಕ್ಕೊಂದು ಪ್ರೇಮ ಪತ್ರ. . .

ನಿನ್ನ ಹೀಗೆ ಕರೆದರೆ ನಿನಗೆ ತುಂಬಾ ಕೋಪ ಬರುತ್ತೆ ಅಂತ ನಂಗೆ ಗೊತ್ತು. ಅದರೂ ತುಸು ಕಪ್ಪಗಿರೋ ನಿನ್ನ ಕಾಗೆ ಬಂಗಾರ ಅಂತ ಕರೆದೂ ನಿನ್ನ ಆಗಾಗ ರೇಗಿಸ್ತಾ ಇರಬೇಕು ಅನ್ನೋ ಆಸೆ. ಕೊಂಚ ಡಿಫರೆಂಟ್ ಅಲ್ವಾ ನಿನ್ನ ಹೆಸರು ಬಹುಶಃ ಯಾರು ಹೀಗೆ ಕರೆದಿರೊಲ್ಲ ಅಲ್ವಾ ? ನೀನಂತೂ ಜವಾಬ್ದಾರಿ, ಲೈಫ್ ನಲ್ಲಿ ಸೆಟ್ಲ್ ಆಗಬೇಕು ಅಂತ ದೂರದಲ್ಲಿ ಎಲ್ಲೋ ಒಂದು ಕಡೆ ಕೂತ್ಕೊಂಡಿದೀಯ ಆದರೆ ನನಗೆ ನಿನ್ನಷ್ಟು ಸಹನೆಯಂತೂ ಇಲ್ಲಪ್ಪ ನಾನೊಬ್ಬಳು ನಿನಗೋಸ್ಕರ ಇದೀನಿ ಅಂತ ನಾನು ನಿನಗೆ ನೆನಪಿಸಬೇಕಾಗಿದೆ ನೋಡು ನನ್ನಂಥ ನತದೃಷ್ಟ ಪ್ರೇಮಿ ಮತ್ತೊಬ್ಬಳಿಲ್ಲ ಅಂತ ಅನ್ನಿಸುತ್ತೆ.


ನಿನಗೆ ನೆನಪಿದೆಯಾ? ಕಳೆದ ವರ್ಷ ಪ್ರೇಮಿಗಳ ದಿನದಂದು ಮಲ್ಲಿಗೆ ಹೂವು ಕೊಟ್ಟು ನೀನು ನನ್ನ ಪ್ರಪೋಸ್ ಮಾಡಿದ ದಿನ ಇಂದಿಗೆ ಒಂದು ವರ್ಷ! ಆದರೆ ಬಾರಿ ನೀನೆ ನಾಪತ್ತೆ. ಇಲ್ಲಿ ಎಲ್ಲ ಪ್ರೇಮಿಗಳು ದಿನಕ್ಕೆ ಎಲ್ಲಿ ಹೋಗಬೇಕು , ಏನು ಗಿಫ್ಟ್ ಕೊಡಬೇಕು ಅನ್ನುವ ಖುಷಿಯಲ್ಲಿ ಇದ್ದರೆ ನಾನು ಮಾತ್ರ ನೀನು ಬರುವ ನೀರಿಕ್ಷೆಯಲ್ಲಿಯೇ ಕಾಲ ಕಳೆಯಬೇಕಿದೆ. ಒಂದು ತಿಂಗಳಿಂದ ಒಂದು ಫೋನ್ ಕರೆ ಕೂಡ ಇಲ್ಲ. ಅದಕ್ಕೆ ಬಾರಿ ನಿನಗೆ ಒಂದು ಪತ್ರ ಕಳುಹಿಸಿದೀನಿ. ನೋಡಿದ ಮೇಲೆ ನಿರಾಸೆ ಮಾಡಬೇಡ ಅದರಲ್ಲಿ ನನ್ನದೊಂದು ಒತ್ತಾಸೆಯಿದೆ. ಬಾರಿಯ ಪ್ರೇಮಿಗಳ ದಿನದಂದು ಅಪೂರ್ವ ಉಡುಗೊರೆಯೊಂದಿಗೆ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಕಾಯುತ್ತಾ ಇರುತ್ತೇನೆ.ನಿನ್ನ ಕೈ ಹಿಡಿದು ಸಾವಿರದ ಮೆಟ್ಟಿಲುಗಳನ್ನು ನಿನ್ನೊಂದಿಗೆ ಹತ್ತುವಾಸೆ. ಇಷ್ಟು ದಿನದ ವಿರಹ ವೇದನೆಗೆ ಪ್ರೇಮಿಗಳ ದಿನದಂದು ಒಂದು ಬ್ರೇಕ್ ಕೊಡ್ಲಿ ಅಲ್ವಾ? ಬರುವಾಗ ಮಲ್ಲೆ ಹೂ ಮರೆಯದಿರು ಅದೇ ಅಂದು ನೀನು ನನಗೆ ಕೊಡುವ ಒಲವಿನ ಕಾಣಿಕೆ! ನಿರಾಸೆಗೊಳಿಸಬೇಡ ನನ್ನ ಮುದ್ದಿನ ಕಾಗೆ ಬಂಗಾರ ಬರ್ತೀಯಾ ಅಲ್ವಾ?


ನಿನ್ನ ಕನಸು ಕಂಗಳ ಹುಡುಗಿ

2 comments:

  1. ಆತ್ಮೀಯ
    ನಿಮ್ಮ ಕಾಗೆ ಬ೦ಗಾರ ಬರ್ತಾನೆ ಬಿಡಿ. ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊ೦ಡುಬಿಟ್ಟಿದ್ದಾನೆ. :) ಹ ಹ್ಹ . ಚೆನ್ನಾಗಿದೆ. ಪತ್ರ ಚಿಕ್ಕದಾಯ್ತು ಜೊತೆಗೆ ವಸ್ತುವು ಕೂಡ. ಒ೦ದು ಸನ್ನಿವೇಶಕ್ಕೆ ಕಲ್ಪನೆ ಮತ್ತು ಇನ್ನೂ ಹಲವು ಸನ್ನಿವೇಶವನ್ನು ಸೇರಿಸಿ ರ೦ಜನೀಯ ಜೊತೆಗೆ ಭಾವ ಎರಡನ್ನೂ ಎರಕ ಹೊಯ್ದು ಬರೆಯಿರಿ.
    ನಿಮ್ಮವ
    ಹರಿ

    ReplyDelete
  2. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ...
    ಹೌದು ಅನ್ನಿಸಿತು ಹಾಗೆ ಪ್ರಯತ್ನಿಸುತ್ತೇನೆ..

    ReplyDelete